Muktha Balaga

Archive for ಜೂನ್ 2008

ಸುಮಾರು ಕನ್ನಡ ಪುಸ್ತಕಗಳನ್ನ ಓದುತ್ತಿರುತ್ತೇನೆ, ತೇಜಸ್ವಿ, ಬಿ.ಜಿ.ಎಲ್ ಸ್ವಾಮಿ, ಸುನಂದಮ್ಮ, ಯಂಡಮೂರಿ ಹೀಗೆ… ಹಾಗೆ Novel based ಕನ್ನಡ ಸಿನಿಮಾಗಳನ್ನು ನೋಡುತ್ತಿರುತ್ತೇನೆ ಆಗಾಗ.

ಓದುಗ ಮಿತ್ರರು S L ಭೈರಪ್ಪನವರ ಕ್ರಿತಿಗಳ ಬಗ್ಗೆ ಮಾತಾಡುತ್ತಿದ್ದರೆ, ನನಗೆ ನನ್ನ views  ಹೇಳಲು ಒಂದು ಕಾಸಿನಷ್ಟು ವಿಷಯವಿರುವುದಿಲ್ಲ.. ಏಕೆಂದರೆ ನಾನವರ ಒಂದೂ ಪುಸ್ತಕವನ್ನು ಇದುವರೆಗೆ ಪೂರ್ತಿಯಾಗಿ ಓದಿಲ್ಲ. ಅಯ್ಯೋ ಕನ್ನಡತಿ ಯಾಗಿ ಜನ್ಮ ಪಡೆದಿದ್ದೆ waste ಅನ್ನೋ ಅಷ್ಟು ಬೈಗುಳವನ್ನು ಸ್ವೀಕರಿಸಿದ್ದೇನೆ. ಮೊನ್ನೆ ಸುವರ್ಣ ಚಾನಲ್ ನಲ್ಲಿ ಗಿರೀಶ್ ಕಾಸರವಳ್ಳಿ ಯವರು ನಿರ್ದೇಶಿಸಿರುವ “ನಾಯಿ ನೆರಳು” ಚಿತ್ರ ಬರುತ್ತಿತ್ತು.. ನೋಡಿ ಬಹಳ ಖುಶಿಯಾಯ್ತು. ಹೀಗೆ ಎಲ್ಲರೊಡನೆ ಚರ್ಚಿಸುತ್ತಿರುವಾಗ ಅವರ literary works ಬಗ್ಗೆ ಹೇಳುತ್ತಾ, ಅವರ ಪುಸ್ತಕ ಓದಿಸುವಂತೆ ಸೂಚಿಸಿದರು. ಸುಮಾರು ೨೦ ವರ್ಷ್ದವಳಿದ್ದಾಗ ಅವರ ಪರ್ವ ಪುಸ್ತಕವನ್ನು ಓದಲು ಪ್ರಯತ್ನಿಸಿದ್ದೆ, ಮೊದಲು ೪ ಪುಟ ಓದುವಷ್ಟರಲ್ಲೆ interest ಹೋಗಿತ್ತು.

ಯಾರೋ ಎಲ್ಲೊ ಹೇಳಿದ ನೆನಪು.. ನೀನೆನಾದರು ಹೊಸ ರುಚಿ ಪ್ರಯತ್ನಿಸಬೇಕಾದ್ರೆ ಅದನ್ನು ಚೆನ್ನಾಗಿರುವ ಕಡೆ ಪ್ರಯತ್ನಿಸು, ಒಮ್ಮೆ ಅದರ ಬಗ್ಗೆ ಚೆನಾಗಿಲ್ಲವೆಂಬ ಆಲೋಚನೆ ಬಂದರೆ, ಇನ್ನೆಂದೂ ಸಹ ಅದರ ನಿಜವಾದ ಸವಿಯನ್ನು ಸವಿಯಲಾರೆ ಅನ್ನೋ ಮಾತು.. ನಾನು ಒಂದಾದರು S L Byrappa ನವರ ಪುಸ್ತಕವನ್ನು ಓದೋಣ ವೆಂದು ಕೊಳ್ಳುತ್ತಿದೇನೆ. ಮೊದಲಿಗೆ ಯಾವ ಪುಸ್ತಕ ಓದಿದರೆ ಚೆನ್ನ? ದಯವಿಟ್ಟು ತಿಳಿಸಿ. ಹಾಗೆ ಅವರ ಪುಸ್ತಕಗಳ ಬಗ್ಗೆ ನಿಮ್ಮ ಅಬಿಪ್ರಾಯ, ಅಬಿರುಚಿಯನ್ನು ಬರೆಯಿರಿ.

ಅವರ ಪುಸ್ತಕಗಳ ಪಟ್ಟಿ ಹೀಗಿವೆ, ಬಿಟ್ಟಿದ್ದರೆ Add ಮಾಡಿ

೧. ಪರ್ವ(PARVA)
೨. ಸಾಕ್ಷಿ (SAAKSHI )
೩. ನಾಯಿ ನೆರಳು(NAAYI NERALU)
೪. ಧಾಟು (DHAATU)
೫. ನಿರಾಕರಣ (NIRAAKARANA)
೬. ದೂರಸರಿದವರು (DOORASARIDARU)
೭. ಆವರಣ (AAVARANA)
೮. ಜಲಪಾತ(JALAPATHA)
೯. ನೆಲೆ(NELE)
೧೦. ನಾನೇಕೆ ಬರೆಯುತ್ತೇನೆ (NANEKE BAREYUTHENE )
೧೧. ಮಂದ್ರ(MANDRA)
೧೨. ಗೃಹಭಂಗ(GRUHABHANGA)
೧೩. ವಂಶವೃಕ್ಷ (VAMSHAVRUKSHA )
೧೪. ಅನ್ವೇಷಣೆ(ANVESHANE)
೧೫. ಅಂಚು(ANCHU)
೧೬. ಧರ್ಮಶ್ರೀ(DHARMSHREE )
೧೭. ಸಾಹಿತ್ಯ ಮತ್ತು ಪ್ರತೀಕ(SAHITYA MATTU PRATIKA )
೧೮. ಗ್ರಹಣ (GRAHANA)

೧೯. ತಬ್ಬಲಿ ನೀನಾದೆ ಮಗನೆ(TABBALI NEENAADE MAGANE)

೨೦. ಸಾರ್ಥ (SAARTHA)

೨೧. ತಂತು (TANTU)

೨೨. ಮತದಾನ (MATADAANA)

೨೩. ಭಿತ್ತಿ (BITTHI)

೨೪. ಭೀಮಕಾಯ (BHEEMAKAAYA)

 ಸಪ್ನ ಆನ್ ಲೈನ್ ನಲ್ಲಿ ಸಿಕ್ಕಿದ್ದು ಇಷ್ಟು, ಇನ್ನಿದ್ದರೆ ದಯವಿಟ್ಟು ಸೇರಿಸಿ.

ಹಾಗೆ ನೋಡಿದ್ದಲ್ಲಿ, ಭೈರಪ್ಪನವರ ಕೃತಿ/ಕಾದಂಬರಿಗಳನ್ನ ಆಧರಿಸಿದ ಬಹಳ ಸಿನಿಮಾಗಳು ಬಂದಿವೆ, ನನಗೆ ತಿಳಿದ ಮಟ್ಟಿಗೆ ಸಿನಿಮದ ರೂಪದಲ್ಲಿನ ಅವರ ಕಾದಂಬರಿಗಳು ಇಲ್ಲಿವೆ.

೧. ನಾಯಿ ನೆರಳು (ಗಿರೀಶ್ ಕಾಸರವಳ್ಳಿ)

೨. ವಂಶವೃಕ್ಷ (ಗಿರೀಶ್ ಕಾರ್ನಾಡ್)

೩. ತಬ್ಬಲಿ ನೀನಾದೆ ಮಗನೆ (??)

೪. ಮತದಾನ(ಟಿ.ಎನ್.ಸೀತಾರಾಂ)

ಪೂರಕ ಓದಿಗೆ:
S L Bhairappa’s novels and the Gyaanapeeth award

ಕನ್ನಡ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಖರೀದಿಸಬಹುದು. ಕೆಳಗಿನ ಲಿಂಕ್ ಗಳು ಉಪಯುಕ್ತ…

ಸಪ್ನ ಬುಕ್ ಹೌಸ್

ಟೋಟಲ್ ಕನ್ನಡ ಡಾಟ್ ಕಾಮ್

ಯೌಲುಪ್ ಡಾಟ್ ಕಾಮ್

Advertisements

 

ಒಂದೆಡೆ ಸಮುದ್ರ ತೀರ, ದಡದ ಮೇಲೆ ನೂರಾರು ನಕ್ಷತ್ರ ಮೀನು(star fish)ಗಳು ಸತ್ತು ಬಿದ್ದಿರುತ್ತವೆ. ಅಲ್ಲಿದ್ದ ಪುಟ್ಟ ಕಂದ ಅಮ್ಮನನ್ನು ಕುತೂಹಲದಿಂದ ಪ್ರಶ್ನಿಸಿದ.. ಆಗ ಅಮ್ಮ ಹೇಳಿದ ಮಾತು — “ಮಗು, ಸಮುದ್ರದ ಅಲೆಗಳ ರಭಸಕ್ಕೆ ಆ ಮೀನುಗಳೆಲ್ಲ ದಡಕ್ಕೆ ಬಂದು ಬಿದ್ದು, ಬಿಸಿಲಿನ ತಾಪಕ್ಕೆ ಸಾಯುತ್ತಿವೆ” . ಸ್ವಲ್ಪ ಹೊತ್ತಿನ ನಂತರ ಆ ಪುಟ್ಟ ಮಗು ಒಂದೊಂದು ಮೀನನ್ನು ಸಮುದ್ರಕ್ಕೆ ಎಸೆಯಲು ಶುರು ಮಾಡುತ್ತಾನೆ, ಅಲ್ಲಿದ್ದ ಜನರೆಲ್ಲ ಆ ಮಗುವಿನಿಂದ ಪ್ರೇರಿಪಿತಗೊಂಡು ಮೀನುಗಳನ್ನು ನೀರಿಗೆ ಎಸೆಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.

ಹಾಗೆ ಟಿ.ವಿ ಯಲ್ಲಿ ಒಂದು “Advertisement” ನೋಡಿದ ನೆನಪು.. ಆಗಷ್ಟೆ ಮಳೆ ಬಂದು ನಿಂತಿರುತ್ತದೆ, ದೊಡ್ಡದೊಂದು ಮರ ಉರುಳಿ ರಸ್ತೆಯ ಮಧ್ಯಭಾಗದಲ್ಲಿ ಬಿದ್ದಿರುತ್ತದೆ. ಎಲ್ಲ ಚಾಲಕರು(ಕಾರು, ಬೈಕು, ಇತ್ಯಾದಿ) ಸುಮ್ಮನೆ ಹಾರ್ನ್ ಮಾಡಿ ಸದ್ದು ಮಾಡುತ್ತ ಒಬ್ಬರನೊಬ್ಬರು ನೋಡುತ್ತ ಮನಸ್ಸಿನಲ್ಲೆ ಸರ್ಕಾರವನ್ನು ಶಪಿಸುತ್ತಾ ನಿಂತಿರುತ್ತಾರೆ. ಆಗೊಬ್ಬ ಪುಟ್ಟ ಬಾಲಕ ಮುಂದೆ ಬಂದು ಆ ಮರವನ್ನು ತಳ್ಳುವ ಪ್ರಯತ್ನ ಮಾಡುತ್ತಾನೆ, ಅಲ್ಲಿದ್ದ ಎಲ್ಲ ಚಾಲಕರು ಬಂದು ಆ ಮರದ ದಿಮ್ಮಿಯನ್ನು ಪಕ್ಕಕ್ಕೆ ಸರಿಸಲು ಕೈ ಜೋಡಿಸುತ್ತಾರೆ.

ಮೇಲೆರಡು ಸನ್ನಿವೇಶಗಳಲ್ಲಿ ಎರಡು ಅಂಶವನ್ನು ಗಮನಿಸಬೇಕಾಗುತ್ತದೆ.

೧. ಒಂದು ಪುಟ್ಟ ಮಗುವಿಗೆ ಅನ್ನಿಸಿದ್ದು ದೊಡ್ಡವರಿಗೇಕೆ ಹೊಳೆಯುವುದಿಲ್ಲ.

೨. ಮುಕ್ಕಾಲು ಪಾಲು, ನಮ್ಮೊಬ್ಬರ ಕೈಲಿ ಎನಾದೀತು ಎಂಬ ಕಾರಣದಿಂದ ಯಾವ ಕೆಲಸಕ್ಕು ಕೈ ಹಾಕಲು ಮುಂದಾಗುವುದಿಲ್ಲ ನಾವು(ದೊಡ್ಡವರು).

 ಇದಕ್ಕೆ ಉದಾಹರಣೆಯಾಗಿ ಬೇಕಾದಷ್ಟು ಸನ್ನಿವೇಶಗಳನ್ನು ವಿವರಿಸುತ್ತ ಹೋಗಬಹುದು. ರೈಲಿನಲ್ಲಿ ಕಡಲೆಕಾಯಿ ತಿಂದು ಅದರ ಸಿಪ್ಪೆಯನ್ನು ಅಲ್ಲೆ ಬಿಸಾಡುವವರು ಎಷ್ಟೋ ಜನ. ನಾವೊಬ್ಬರಾದರು ಸಿಪ್ಪೆಯನ್ನು ಒಂದು ಪೇಪರಿನಲ್ಲಿ ಹಾಕಿದಾಗ (ಅದನ್ನು ಕಸದ ಬುಟ್ಟಿಯಲ್ಲಿ ಹಾಕಲು), ಪಕ್ಕದಲ್ಲಿರುವವರು ’ಓಹೋ ನೀನೊಬ್ಬಳು ಈ ತರ ಮಾಡಿದ್ರೆ ರೈಲು ಗಲೀಜು ಆಗೊಲ್ವ’? ಅನ್ನೋದು ಬಹಳ ಅನುಭವಕ್ಕೆ ಬಂದಿರುವ ಸುದ್ದಿ.. ಆ ಸಣ್ಣ ಪ್ರಯತ್ನ ಒಳ್ಳೆಯ ಕೆಲಸಕ್ಕೆ ನಾಂದಿ ಅನ್ನುವ ಸಣ್ಣ ಸತ್ಯವನ್ನು ಮರೆತು ಮಾತಡಿಬಿಡುತ್ತೇವೆ.

ಅದು ಹಾಗಿರಲಿ, ಜೂನ್ ೫(5)ರಂದು ವಿಶ್ವ ಪರಿಸರ ದಿನ.. ನಾವೆಲ್ಲರು ಒಂದೊಂದು ಗಿಡ ನೆಟ್ಟರೆ ಹೇಗೆ…? ಮೈಸೂರಿನಲ್ಲಿ ನೀವೇನಾದರು ಇದ್ದರೆ ಖಂಡಿತ ನಮ್ಮ ಮನೆಯ ಮುಂಭಾಗದಲ್ಲಿರುವ ಪಾರ್ಕಿಗೆ ಬನ್ನಿ.. ಅಲ್ಲೊಂದು ಗಿಡ ನೆಡಿ.. ಅಲ್ಲಿಯೆ ಬರಬೇಕೆಂದಲ್ಲ ನಿಮ್ಮ ಮನೆಯ ಅಂಗಳದಲ್ಲೋ ಅಥವಾ ಕಛೇರಿಯಲ್ಲೋ ಒಂದು ಗಿಡ ನೆಡಿ…

ಇನ್ನಷ್ಟು ವರ್ಷವಾದ ಬಳಿಕ ನಮ್ಮ ಮುಂದಿನ ಪೀಳಿಗೆ ಆ ಮರದ ಗಾಳಿ ಸವಿಯಲಿ… ಹಾಗೇನಾದರು ಬಿಸಿಲಿದ್ದಲ್ಲಿ ಕೊಂಚ ಸಮಯ ಆ ಮರದಡಿಯಲ್ಲಿ ನಿಂತು ಹೊರಡಲಿ….

–ವೀಣಾ ಶಿವಣ್ಣ.

ಟ್ಯಾಗ್ ಗಳು:

a

Blog Stats

  • 266,928 hits
Advertisements