Muktha Balaga

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ….

Posted on: ಮೇ 17, 2008

ಹೀಗೆ ಒಂದಿಷ್ಟು ಹಾಡು ಕೇಳುತ್ತ ಮಗನಿಗೆ ಹಾಡನ್ನು ಕೇಳಿಸುತ್ತ ಕೆಲ ಹಾಡುಗಳನ್ನು ಮೆಲುಕು ಹಾಕುತ್ತಿದ್ದೆ. ಬಾಲ್ಯದಿಂದಲು ಕೇಳಿಕೊಂಡು ಬರುತ್ತಿದ್ದ ಈ ಹಾಡು ಇಂದು ಬಹಳ ನೆನಪಾಯ್ತು. ಸಿ.ಡಿ. ಹುಡುಕಿ ಆ ಹಾಡನ್ನು ಒಂದೆರಡು ಸಲ ಕೇಳಿ ಕೇಳಿ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಹಾಗೆಯೇ ಆ ಹಾಡಿನಲ್ಲಿ ಬರುವ ಸಾಲುಗಳನ್ನು ನನ್ನ ಮಗ ನನಗೆ ಹಾಡಿ ಕೃಷ್ಣ ಮಾಡಿದ ಎಲ್ಲ ನಾಟಕವನ್ನು ಮಾಡಿದರೆ ಹೇಗಿರುತ್ತೆಂದು ನೆನೆದುಕೊಂಡು ಹಾಗೆ ಒಳ ಒಳಗೆ ನಕ್ಕು ಸುಮ್ಮನಾದೆ.

ಚಿತ್ರಗಳು ಸಿಕ್ಕವು , ಹಾಗಾಗಿ ಆ ಹಾಡನ್ನು ಇಲ್ಲಿ ಬರೆಯೋಣ ಎನ್ನಿಸಿತು.

 ———————————————————————————————————-

 ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

amma ಕೃಷ್ಣ ಒಬ್ಬ ಪುಟ್ಟ ಕಂದಮ್ಮನಾಗಿ, ತನ್ನ ಅಮ್ಮ ಯಶೋಧೆಗೆ ತಾನು ಬೆಣ್ಣೆ ಕದ್ದೆ ಇಲ್ಲ ಎಂಬ  ನಟನೆ ಮಾಡುತ್ತಾನೆ, ಹಾಗೆಯೇ, ಇನ್ನು ನಂಬಿಕೆ ಬರಲೆಂದು, ಬೇರೆಯವರು ತನ್ನ ಬಾಯಿಗೆ ಬೆಣ್ಣೆ ಮೆತ್ತಿದ್ದಾರೆಂಬ ದೂರು ನೀಡುತ್ತಾನೆ. (ಕೃಷ್ಣ ದೇವರಾದರೇನು, ಅಮ್ಮನಿಗೆ ಮಗನೆ, ಹಾಗೆ ಎಲ್ಲ ಮಕ್ಕಳು ಸಹ ತಾವು ತಪ್ಪು ಮಾಡಿ, ಬೇರೆಯವರು ಮಾಡಿರೆಂದು ಹೇಳುವುದು ಒಂದು ಅಭ್ಯಾಸ, ಬಹುಶಃ ಇದನ್ನು ಕಳ್ಳ ಕೃಷ್ಣನೇ ಮಕ್ಕಳಿಗೆ ಹೇಳಿಕೊಟ್ಟಿರಬೇಕು. 🙂 
 
 
 
 
 
 
 
 
 
ನೀನೇ ನೋಡು ಬೆಣ್ಣೆ ಗಡಿಗೆ ಸೂಲಿನ ನೆಲುವಲ್ಲಿ, ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||ಅಮ್ಮ ||
 

   

 

 

 

 

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ,ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||ಅಮ್ಮ ||

                                       

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಸೂರದಾಸ ಪ್ರಿಯಶಾಮನ ಶಾಮನ … ಸೂರದಾಸ ಪ್ರಿಯಶಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮ ||  

ನಿನ್ನ ಮಗ ಬೆಣ್ಣೆ ಕದ್ದನೆಂಬ ದೂರಿನೊಂದಿಗೆ ಬಂದ ಗೋಪಿ ಮುತ್ತಿಟ್ಟು ನಗುವಂತೆ ಮಾಡುತ್ತವೆ ಕಂದನ ನೆಪಗಳು..

 

 

 

 

 ಹೆಚ್.ಎಸ್.ವೆಂಕಟೇಶ್ ಮೂರ್ತಿ ಯವರ ರಚನೆ ಬಹಳ ಅಧ್ಭುತ

 

— ವೀಣಾ ಶಿವಣ್ಣ

 

Advertisements
ಟ್ಯಾಗ್ ಗಳು:

10 Responses to "ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ…."

Hi,

I heard this is originally composed in by Sant Surdas and beautifully translated by HSV.
The original composition starts as
“Maiya Mori Maein Nahin Maakhan Khayo
Kahat Sunat Mein Aakar Kaahe Jhootha Dosh Lagayo”

I think this is a dialect of hindhi. !!

Thanks
Anand

very nice.
the other song I remember for many years now- “beNNe kaddha namma krishna beNNe kaddha nammaa” a beautiful song. [ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ನಮ್ಮಾ]

I have been searching for this song sung by B K Sumitra, which used to get aired on Akash vani once upon a time. The songs is ” Odalemba gudiyolage”, which is a very soul-stirring one. I hve not been able to get this song anywhere. Can anyone help me with this ?

KAVYA SUDHE ALBUM,GOGLE IT,ITS IN YOU TUBE TOO

Even I am also searching for the same song which is sung by BK sumitra please help me out where i will get this song CD or Cassete.

Here is the lyrics:

ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು
ನಡೆಯುವೇನು ನಡೆಸಿದಂತವನು ಕೈ ಬಿಡನು
ಬಡವ ತಬ್ಬಲಿಯೆಂದು ಚಡಪಡಿಸದಿರು ನೀನು
ಕೊಡುವಾತ ಬಿಡುವಾತ ನನ್ನ ಒಳಗಿಹನು

ನಾನೇ ಆಡಿದ ನನ್ನ ಕೋಡಂಗಿ ಆಟವನು
ನೋಡಿ ಕೈ ಪರೆಗುದ್ದಿ ನಕ್ಕವನು ಅವನು
ನನ್ನ ಹಿಂದೆಯೇ ಇದ್ದು ನಾ ಬಿದ್ದೆ ಎಂದಾಗ
ಬಂದೆತ್ತಿ ಕಣ್ಣೊರಸಿ ನಗಿಸಿದವನವನು

ನನ್ನೊಡಲಲಿರ್ಪಾತ ನಾ ತಾನೇ ಸದಾಶಿವನು
ಕ್ಷೇಮಕಾರಕ ಮೂರ್ತಿ ನನಗೆಂದು ಅವನು
ನನ್ನ ಜೀವನ ರಥದ ವಿಜಯದ ಮಹೋತ್ಸವಕೆ
ತಾನೇ ಸಾರಥಿಯಾಗಿ ನಡೆಸುವನು ಜಯಕೆ

The song can be listened to at: http://www.musicindiaonline.com/music/kannada/s/album.10610/singer.5771/

Radhika, Thank you very much for sending the lyrics and site.

Hello Sunita I had visited that site i heard lot of songs including this

Odalemba gudiyolage & one more my favourite song “yeni mahanadavi

o bhamini. That CD name is Bhavotsava. I think this CD is available in

most of the CD center.

I am very greatful to Radhika. Thanks Radhika.

hey its good. If you have lyrics of song aganitha thaara ganagala naduve by kuvempu can you please share it..

super song sir hate’s of you sir

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

a

Blog Stats

  • 265,735 hits
Advertisements
%d bloggers like this: