Muktha Balaga

Archive for ಏಪ್ರಿಲ್ 2008

ಪಲ್ಲವಿ ಅರುಣ್

ಸುಮಾರು ಐದಾರು ತಿಂಗಳುಗಳಿಂದ ಕೆಲ ಹಾಡುಗಳನ್ನು ಹುಡುಕುತ್ತಿದ್ದೆ. ಅದರ  ಸಂಗೀತ ಅಥವ ಸಾಹಿತ್ಯ  ವೈಖರಿಗಷ್ಟೆ ಅಲ್ಲ , ಅದನ್ನು ಕೇಳಿದರೆ ಯಾರಿಗಾದರು ಹಿತವೆನ್ನಿಸಬೇಕು ಅದನ್ನು ಕೇಳುತ್ತಲೇ ಇರಬೇಕು ಅನ್ನುವಂತಹದ್ದು.. ಹಾಗೆ ಕೇಳುತ್ತಾ ನಿದ್ದೆ ತರಿಸುವಂತದ್ದು…

ಕನ್ನಡದಲ್ಲಿ ಅಂತಹ ಹಾಡುಗಳು ನೂರಾರು ಇವೆ. ಅದನ್ನೆಲ್ಲ ಒಂದೆ ಒಂದು ಸಿ.ಡಿ ಯಲ್ಲಿ ಸಿಗುತ್ತದೆಯಾ ಅಂತ ಒಂದಷ್ಟು ಸ್ನೇಹಿತರನ್ನು ಕೇಳಿದೆ. ಮಕ್ಕಳಿಗೆ ಅಂದಾಕ್ಷಣ ಎಲ್ಲರಿಗು ನೆನಪಿಗೆ ಬರೋದು ಕೆಲ ಶಿಶು ಗೀತೆಗಳು.. ಅದನ್ನು ಕೇಳಿ ಆನಂದಿಸಬೇಕೆಂದರೆ ಇನ್ನು ಕೆಲ ವರ್ಷಗಳೇ ಬೇಕು ನನ್ನ ಮಗ ಸಿದ್ಧಾಂತನಿಗೆ.

ಮೊನ್ನೆ ಹೀಗೆ ಮ್ಯುಸಿಕ್ ವರ್ಲ್ಡ್ ಗೆ ಹೊಗಿದ್ದಾಗ ನನ್ನ ಕಣ್ಣಿಗೆ ಬಿದ್ದದ್ದು ಈ ಸಿ.ಡಿ.. ಒಂತರ ನನ್ನ ಹುಡುಕಾಟಕ್ಕೆ ಫಲ ಸಿಕ್ಕ ಹಾಗೆ ಇತ್ತು ಇದು.

——————————————————————————————————————————————————————-

ದಾಸ ಸಾಹಿತ್ಯಕ್ಕೆ, ಸುಮಧುರ ಸಂಗೀತ ನೀಡಿರುವ ಪ್ರವೀಣ್ ರಾವ್, ಹಾಗೆ ತಮ್ಮ ಕಂಠಸಿರಿ ಇಂದ ನಮ್ಮನೆಲ್ಲಾ ಆನಂದ ಗೊಳಿಸುವುವ ಪಲ್ಲವಿಗು ನನ್ನ ವಂದನೆಗಳು….!

ಇದರಲಿನ್ನ ಒಂದೊಂದು ಹಾಡುಗಳು ಅತ್ಯದ್ಬುತ.. ನನಗನ್ನಿಸಿದ ಹಾಗೆ ಇಲ್ಲಿ ವಿಶ್ಲೇಶಿಸಿದ್ದೇನೆ.

೧ – ಜೋ ಜೋ ಓ ರಂಗಧಾಮ – ಆ ಕಂದ ಕೃಷ್ಣನ್ನ ಮಲಗಿಸಲು ತಾಯಿ ಯಶೋಧೆ ಹಾಡಿದ ಹಾಡುಗಳೆಷ್ಟೋ, ವಿಷ್ಣುವಿನ ಕೆಲ ಸಾತ್ವಿಕ ಅವತಾರಗಳನ್ನು ಆಧರಿಸಿ ರಚಿಸಿದ ಹಾಡು ಇದು. ಒಂದೆರಡು ಸಾಲುಗಳು ಹೀಗಿವೆ.

ವಸುದೇವ ಸುತನಾದ ಮುದ್ದು ಮುರಾರಿ, ಅಸುರಿ ಪೂತನಿಯ ಪ್ರಾಣೋಪಹಾರಿ…

ಪರುಶು ಧರಿಸಿ ಕ್ಷತ್ರಿಯರ ಸವರಿದೆ, ದುರುಳ ರಾವಣ ಶಿರವ ಚೆಂಡಾಡಿದೆ….

ಸುಮಾರು ಎಂಟು ನಿಮಿಷಗಳ ಕಾಲ ಹಾಗೆ ಹರಿದು ಬರುವ ಈ ಹಾಡು ಬಹಳ ಸೊಗಸಾಗಿದೆ. ಇದರಲ್ಲಿನ ಸುಮಧುರ ಸಂಗೀತ ಹಾಗು ಸಾಹಿತ್ಯ ಅಪರೂಪದ್ದು.

೨ – ತೂಗಿರೆ ರಂಗನ್ನ ತೋಗಿರೆ ಕೃಷ್ಟ್ಣನ್ನ – ಮಗುವನ್ನು ತೊಟ್ಟಿಲಲ್ಲಿ ತೂಗುತ್ತ ತೂಗುತ್ತ ಹಾಡುವ ಹಾಡು ಇದು. ತೊಟ್ಟಿಲು ಶಾಸ್ತ್ರಕ್ಕೆ ಅಂತಾನೆ ಬರೆದ ಹಾಡಿರಬೇಕು ಅನ್ನಿಸುತ್ತದೆ.

೩ – ಪವಡಿಸು ಪರಮಾತ್ಮನೆ ಸ್ವಾಮಿ – ಆ ತಾಯಿ ತನ್ನ ಮಗುವನ್ನು ಮಲಗು ಸ್ವಾಮಿ ಎಂದು ಕೇಳಿಕೊಳ್ಳುವ ಸಂಗತಿ ಈ ಹಾಡಿನಲ್ಲಿದೆ. ಬಹಳ ಸುಂದರ ಹಾಗು ಸುಶ್ರಾವ್ಯ ಸ್ವರ ಗಳಿಂದ ಕೂಡಿದೆ ಈ ಲಾಲಿ ಪದ.

೪-ಜೋ ಜೋ ಶ್ರೀ ಕೃಷ್ಣ ಪರಮಾನಂದ – ಯಶೋಧೆ ಆ ಮುರಾರಿಗೆ ಹಾಡುವ ಹಾಡಿದು. ಬಹಶಃ ದಶವತಾರಗಳಲ್ಲಿ ಸುಮಾರು ಲಾಲಿ ಹಾಡುಗಳನ್ನು ಕೇಳಿದ್ದು ಈ ಅವತಾರದಲ್ಲಿಯೇ ಇರಬೇಕು ಆ ಹರಿ.

೫ – ಲಾಲಿ ಪಾವನ ಚರಣ – ಒಂದು ಸುಂದರ ಹಾಡು, ಈ ಹಾಡನ್ನು ಕೇಳುತ್ತ ಕೇಳುತ್ತ ಮಗು ನಿದ್ದೆ ಹೋಗುವುದು ಹೆಚ್ಚು. ಈ ಹಾಡು ಆ ನಿದ್ರಾದೇವಿಯನ್ನು ಭುವಿಗೆ ತರುವ ಶಕ್ತಿ ಹೊಂದಿರಬೇಕು..!!

೬ – ಜೋ ಜೋ ಕಂದರ್ಪಕೋಟಿ ಲಾವಣ್ಯ – ಈ ಹಾಡು ಬರುವ ಅಷ್ಟರಲ್ಲಿ ಮಗು ನಿದ್ದೆ ಹೋಗಿಬಿಡ್ತಾನೆ, ಈ ಹಾಡು ಕೇಳಿರೋದು ನಾನು ಒಂದೆರಡೆ ಸಲ 🙂

೭ – ಲಾಲಿ ಗೋವಿಂದ ಲಾಲಿ – ಈ ಹಾಡಿನಲ್ಲಿ ಒಂದು ಉನ್ನತ ರಿಧಮ್ ಇದೆ. ಹಾಗೆ ಕೇಳುತ್ತ ನಮಗೆ ಗೊತ್ತಿಲ್ಲದೆಯೇ ಕಾಲು ಕುಣಿಸುವಂತೆ ಮಾಡುವ ಒಂದು ಮಾದುರ್ಯ ಇದೆ.

ನೀವೆಲ್ಲ ಕೇಳಿ ಆನಂದಿಸಿ… ಹಾಗೆ ಕೆಲವು ಭಾವಗೀತೆಗಳು ಹಾಗು ಸಿನಿಮಾ ಹಾಡುಗಳು ಒಂದೆ ಸಿ.ಡಿ ಯಲ್ಲಿ ಲಭ್ಯವಾದರೆ ಎಷ್ಟು ಚೆನ್ನ.. ನನಗೆ ಇಷ್ಟವಾದ ಹಾಡುಗಳು ಹೀಗಿವೆ.

೧-ಆತ್ತಿತ್ತ ನೋಡದಿರು ಎದ್ದು ಹೊರಳಾಡದಿರು – ಭಾವ ಸಂಗಮ

೨ – ನಿನ್ನ ಮುಖ ಅರವಿಂದ ನಿನ್ನ ನಗು ಶ್ರೀಗಂದ – ಕಲ್ಯಾಣಿ

೩ – ರಾಜೀವ ನೇತ್ರನಿಗೆ – ಸ್ವಾತಿಮುತ್ತು

೪ – ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ – ಭಕ್ತ ಪ್ರಹ್ಲಾದ

೫ – ಹಿಂದುಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗು – ಅಮೃತಘಳಿಗೆ

ಹೀಗೆ ನಿಮಗು ಇಂತಹ ಹಾಡು ಗಳು ಇಷ್ಟವಾದಲ್ಲಿ ತಿಳಿಸಿ.. ಲಾಲಿ ಹಾಡು ಗಳನ್ನು ಕೇಳಿ ಆನಂದಿಸಿ.

-ವೀಣಾ ಶಿವಣ್ಣ

ಪೂರಕ ಓದಿಗೆ – ಭಾವಗೀತೆಗಳ ಗುಛ್ಛ

Advertisements
ಟ್ಯಾಗ್ ಗಳು: ,

a

Blog Stats

  • 266,928 hits
Advertisements