Parenting.. A Goal, A Duty or a Journey ?

July 6, 2008

Recently I was talking to my friends regarding the motherhood and the way females get to make so many changes after the baby is born. During the discussion, we spoke about lot of things like the career options for woman, why she has to bear all the changes etc.,

While we were discussing on the goals of life, Career, Money, time for her hobbies and lot of such things came up and I ended up adding Parenting also a major goal of life to which my friend responded like this..

“Parenting is not a goal, its just the duty”….

If I have observed so far, a goal or a duty ends up at some part of time.. and the way our parents take care of ourselves even after we are well versed and are able to(or qualify to lead an independent life) I see that Parenting never ends till the person lasts… So I just concluded that Parenting is neither a goal nor a duty but a fantastic journey ahead…

What do you say ?


S L ಭೈರಪ್ಪನವರ ಪುಸ್ತಕಗಳು ಮತ್ತು ನಾನು…

June 24, 2008

ಸುಮಾರು ಕನ್ನಡ ಪುಸ್ತಕಗಳನ್ನ ಓದುತ್ತಿರುತ್ತೇನೆ, ತೇಜಸ್ವಿ, ಬಿ.ಜಿ.ಎಲ್ ಸ್ವಾಮಿ, ಸುನಂದಮ್ಮ, ಯಂಡಮೂರಿ ಹೀಗೆ… ಹಾಗೆ Novel based ಕನ್ನಡ ಸಿನಿಮಾಗಳನ್ನು ನೋಡುತ್ತಿರುತ್ತೇನೆ ಆಗಾಗ.

ಓದುಗ ಮಿತ್ರರು S L ಭೈರಪ್ಪನವರ ಕ್ರಿತಿಗಳ ಬಗ್ಗೆ ಮಾತಾಡುತ್ತಿದ್ದರೆ, ನನಗೆ ನನ್ನ views  ಹೇಳಲು ಒಂದು ಕಾಸಿನಷ್ಟು ವಿಷಯವಿರುವುದಿಲ್ಲ.. ಏಕೆಂದರೆ ನಾನವರ ಒಂದೂ ಪುಸ್ತಕವನ್ನು ಇದುವರೆಗೆ ಪೂರ್ತಿಯಾಗಿ ಓದಿಲ್ಲ. ಅಯ್ಯೋ ಕನ್ನಡತಿ ಯಾಗಿ ಜನ್ಮ ಪಡೆದಿದ್ದೆ waste ಅನ್ನೋ ಅಷ್ಟು ಬೈಗುಳವನ್ನು ಸ್ವೀಕರಿಸಿದ್ದೇನೆ. ಮೊನ್ನೆ ಸುವರ್ಣ ಚಾನಲ್ ನಲ್ಲಿ ಗಿರೀಶ್ ಕಾಸರವಳ್ಳಿ ಯವರು ನಿರ್ದೇಶಿಸಿರುವ “ನಾಯಿ ನೆರಳು” ಚಿತ್ರ ಬರುತ್ತಿತ್ತು.. ನೋಡಿ ಬಹಳ ಖುಶಿಯಾಯ್ತು. ಹೀಗೆ ಎಲ್ಲರೊಡನೆ ಚರ್ಚಿಸುತ್ತಿರುವಾಗ ಅವರ literary works ಬಗ್ಗೆ ಹೇಳುತ್ತಾ, ಅವರ ಪುಸ್ತಕ ಓದಿಸುವಂತೆ ಸೂಚಿಸಿದರು. ಸುಮಾರು ೨೦ ವರ್ಷ್ದವಳಿದ್ದಾಗ ಅವರ ಪರ್ವ ಪುಸ್ತಕವನ್ನು ಓದಲು ಪ್ರಯತ್ನಿಸಿದ್ದೆ, ಮೊದಲು ೪ ಪುಟ ಓದುವಷ್ಟರಲ್ಲೆ interest ಹೋಗಿತ್ತು.

ಯಾರೋ ಎಲ್ಲೊ ಹೇಳಿದ ನೆನಪು.. ನೀನೆನಾದರು ಹೊಸ ರುಚಿ ಪ್ರಯತ್ನಿಸಬೇಕಾದ್ರೆ ಅದನ್ನು ಚೆನ್ನಾಗಿರುವ ಕಡೆ ಪ್ರಯತ್ನಿಸು, ಒಮ್ಮೆ ಅದರ ಬಗ್ಗೆ ಚೆನಾಗಿಲ್ಲವೆಂಬ ಆಲೋಚನೆ ಬಂದರೆ, ಇನ್ನೆಂದೂ ಸಹ ಅದರ ನಿಜವಾದ ಸವಿಯನ್ನು ಸವಿಯಲಾರೆ ಅನ್ನೋ ಮಾತು.. ನಾನು ಒಂದಾದರು S L Byrappa ನವರ ಪುಸ್ತಕವನ್ನು ಓದೋಣ ವೆಂದು ಕೊಳ್ಳುತ್ತಿದೇನೆ. ಮೊದಲಿಗೆ ಯಾವ ಪುಸ್ತಕ ಓದಿದರೆ ಚೆನ್ನ? ದಯವಿಟ್ಟು ತಿಳಿಸಿ. ಹಾಗೆ ಅವರ ಪುಸ್ತಕಗಳ ಬಗ್ಗೆ ನಿಮ್ಮ ಅಬಿಪ್ರಾಯ, ಅಬಿರುಚಿಯನ್ನು ಬರೆಯಿರಿ.

ಅವರ ಪುಸ್ತಕಗಳ ಪಟ್ಟಿ ಹೀಗಿವೆ, ಬಿಟ್ಟಿದ್ದರೆ Add ಮಾಡಿ

೧. ಪರ್ವ(PARVA)
೨. ಸಾಕ್ಷಿ (SAAKSHI )
೩. ನಾಯಿ ನೆರಳು(NAAYI NERALU)
೪. ಧಾಟು (DHAATU)
೫. ನಿರಾಕರಣ (NIRAAKARANA)
೬. ದೂರಸರಿದವರು (DOORASARIDARU)
೭. ಆವರಣ (AAVARANA)
೮. ಜಲಪಾತ(JALAPATHA)
೯. ನೆಲೆ(NELE)
೧೦. ನಾನೇಕೆ ಬರೆಯುತ್ತೇನೆ (NANEKE BAREYUTHENE )
೧೧. ಮಂದ್ರ(MANDRA)
೧೨. ಗೃಹಭಂಗ(GRUHABHANGA)
೧೩. ವಂಶವೃಕ್ಷ (VAMSHAVRUKSHA )
೧೪. ಅನ್ವೇಷಣೆ(ANVESHANE)
೧೫. ಅಂಚು(ANCHU)
೧೬. ಧರ್ಮಶ್ರೀ(DHARMSHREE )
೧೭. ಸಾಹಿತ್ಯ ಮತ್ತು ಪ್ರತೀಕ(SAHITYA MATTU PRATIKA )
೧೮. ಗ್ರಹಣ (GRAHANA)

೧೯. ತಬ್ಬಲಿ ನೀನಾದೆ ಮಗನೆ(TABBALI NEENAADE MAGANE)

೨೦. ಸಾರ್ಥ (SAARTHA)

೨೧. ತಂತು (TANTU)

೨೨. ಮತದಾನ (MATADAANA)

೨೩. ಭಿತ್ತಿ (BITTHI)

೨೪. ಭೀಮಕಾಯ (BHEEMAKAAYA)

 ಸಪ್ನ ಆನ್ ಲೈನ್ ನಲ್ಲಿ ಸಿಕ್ಕಿದ್ದು ಇಷ್ಟು, ಇನ್ನಿದ್ದರೆ ದಯವಿಟ್ಟು ಸೇರಿಸಿ.

ಹಾಗೆ ನೋಡಿದ್ದಲ್ಲಿ, ಭೈರಪ್ಪನವರ ಕೃತಿ/ಕಾದಂಬರಿಗಳನ್ನ ಆಧರಿಸಿದ ಬಹಳ ಸಿನಿಮಾಗಳು ಬಂದಿವೆ, ನನಗೆ ತಿಳಿದ ಮಟ್ಟಿಗೆ ಸಿನಿಮದ ರೂಪದಲ್ಲಿನ ಅವರ ಕಾದಂಬರಿಗಳು ಇಲ್ಲಿವೆ.

೧. ನಾಯಿ ನೆರಳು (ಗಿರೀಶ್ ಕಾಸರವಳ್ಳಿ)

೨. ವಂಶವೃಕ್ಷ (ಗಿರೀಶ್ ಕಾರ್ನಾಡ್)

೩. ತಬ್ಬಲಿ ನೀನಾದೆ ಮಗನೆ (??)

೪. ಮತದಾನ(ಟಿ.ಎನ್.ಸೀತಾರಾಂ)

ಪೂರಕ ಓದಿಗೆ:
S L Bhairappa’s novels and the Gyaanapeeth award

ಕನ್ನಡ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಖರೀದಿಸಬಹುದು. ಕೆಳಗಿನ ಲಿಂಕ್ ಗಳು ಉಪಯುಕ್ತ…

ಸಪ್ನ ಬುಕ್ ಹೌಸ್

ಟೋಟಲ್ ಕನ್ನಡ ಡಾಟ್ ಕಾಮ್

ಯೌಲುಪ್ ಡಾಟ್ ಕಾಮ್


ಮುಕ್ತ ಮುಕ್ತ….

June 19, 2008

 


ಗಿಡ ಬೆಳೆಸೋಣ ಬನ್ನಿ…..

June 3, 2008

ಒಂದೆಡೆ ಸಮುದ್ರ ತೀರ, ದಡದ ಮೇಲೆ ನೂರಾರು ನಕ್ಷತ್ರ ಮೀನು(star fish)ಗಳು ಸತ್ತು ಬಿದ್ದಿರುತ್ತವೆ. ಅಲ್ಲಿದ್ದ ಪುಟ್ಟ ಕಂದ ಅಮ್ಮನನ್ನು ಕುತೂಹಲದಿಂದ ಪ್ರಶ್ನಿಸಿದ.. ಆಗ ಅಮ್ಮ ಹೇಳಿದ ಮಾತು — “ಮಗು, ಸಮುದ್ರದ ಅಲೆಗಳ ರಭಸಕ್ಕೆ ಆ ಮೀನುಗಳೆಲ್ಲ ದಡಕ್ಕೆ ಬಂದು ಬಿದ್ದು, ಬಿಸಿಲಿನ ತಾಪಕ್ಕೆ ಸಾಯುತ್ತಿವೆ” . ಸ್ವಲ್ಪ ಹೊತ್ತಿನ ನಂತರ ಆ ಪುಟ್ಟ ಮಗು ಒಂದೊಂದು ಮೀನನ್ನು ಸಮುದ್ರಕ್ಕೆ ಎಸೆಯಲು ಶುರು ಮಾಡುತ್ತಾನೆ, ಅಲ್ಲಿದ್ದ ಜನರೆಲ್ಲ ಆ ಮಗುವಿನಿಂದ ಪ್ರೇರಿಪಿತಗೊಂಡು ಮೀನುಗಳನ್ನು ನೀರಿಗೆ ಎಸೆಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.

ಹಾಗೆ ಟಿ.ವಿ ಯಲ್ಲಿ ಒಂದು “Advertisement” ನೋಡಿದ ನೆನಪು.. ಆಗಷ್ಟೆ ಮಳೆ ಬಂದು ನಿಂತಿರುತ್ತದೆ, ದೊಡ್ಡದೊಂದು ಮರ ಉರುಳಿ ರಸ್ತೆಯ ಮಧ್ಯಭಾಗದಲ್ಲಿ ಬಿದ್ದಿರುತ್ತದೆ. ಎಲ್ಲ ಚಾಲಕರು(ಕಾರು, ಬೈಕು, ಇತ್ಯಾದಿ) ಸುಮ್ಮನೆ ಹಾರ್ನ್ ಮಾಡಿ ಸದ್ದು ಮಾಡುತ್ತ ಒಬ್ಬರನೊಬ್ಬರು ನೋಡುತ್ತ ಮನಸ್ಸಿನಲ್ಲೆ ಸರ್ಕಾರವನ್ನು ಶಪಿಸುತ್ತಾ ನಿಂತಿರುತ್ತಾರೆ. ಆಗೊಬ್ಬ ಪುಟ್ಟ ಬಾಲಕ ಮುಂದೆ ಬಂದು ಆ ಮರವನ್ನು ತಳ್ಳುವ ಪ್ರಯತ್ನ ಮಾಡುತ್ತಾನೆ, ಅಲ್ಲಿದ್ದ ಎಲ್ಲ ಚಾಲಕರು ಬಂದು ಆ ಮರದ ದಿಮ್ಮಿಯನ್ನು ಪಕ್ಕಕ್ಕೆ ಸರಿಸಲು ಕೈ ಜೋಡಿಸುತ್ತಾರೆ.

ಮೇಲೆರಡು ಸನ್ನಿವೇಶಗಳಲ್ಲಿ ಎರಡು ಅಂಶವನ್ನು ಗಮನಿಸಬೇಕಾಗುತ್ತದೆ.

೧. ಒಂದು ಪುಟ್ಟ ಮಗುವಿಗೆ ಅನ್ನಿಸಿದ್ದು ದೊಡ್ಡವರಿಗೇಕೆ ಹೊಳೆಯುವುದಿಲ್ಲ.

೨. ಮುಕ್ಕಾಲು ಪಾಲು, ನಮ್ಮೊಬ್ಬರ ಕೈಲಿ ಎನಾದೀತು ಎಂಬ ಕಾರಣದಿಂದ ಯಾವ ಕೆಲಸಕ್ಕು ಕೈ ಹಾಕಲು ಮುಂದಾಗುವುದಿಲ್ಲ ನಾವು(ದೊಡ್ಡವರು).

 ಇದಕ್ಕೆ ಉದಾಹರಣೆಯಾಗಿ ಬೇಕಾದಷ್ಟು ಸನ್ನಿವೇಶಗಳನ್ನು ವಿವರಿಸುತ್ತ ಹೋಗಬಹುದು. ರೈಲಿನಲ್ಲಿ ಕಡಲೆಕಾಯಿ ತಿಂದು ಅದರ ಸಿಪ್ಪೆಯನ್ನು ಅಲ್ಲೆ ಬಿಸಾಡುವವರು ಎಷ್ಟೋ ಜನ. ನಾವೊಬ್ಬರಾದರು ಸಿಪ್ಪೆಯನ್ನು ಒಂದು ಪೇಪರಿನಲ್ಲಿ ಹಾಕಿದಾಗ (ಅದನ್ನು ಕಸದ ಬುಟ್ಟಿಯಲ್ಲಿ ಹಾಕಲು), ಪಕ್ಕದಲ್ಲಿರುವವರು ’ಓಹೋ ನೀನೊಬ್ಬಳು ಈ ತರ ಮಾಡಿದ್ರೆ ರೈಲು ಗಲೀಜು ಆಗೊಲ್ವ’? ಅನ್ನೋದು ಬಹಳ ಅನುಭವಕ್ಕೆ ಬಂದಿರುವ ಸುದ್ದಿ.. ಆ ಸಣ್ಣ ಪ್ರಯತ್ನ ಒಳ್ಳೆಯ ಕೆಲಸಕ್ಕೆ ನಾಂದಿ ಅನ್ನುವ ಸಣ್ಣ ಸತ್ಯವನ್ನು ಮರೆತು ಮಾತಡಿಬಿಡುತ್ತೇವೆ.

ಅದು ಹಾಗಿರಲಿ, ಜೂನ್ ೫(5)ರಂದು ವಿಶ್ವ ಪರಿಸರ ದಿನ.. ನಾವೆಲ್ಲರು ಒಂದೊಂದು ಗಿಡ ನೆಟ್ಟರೆ ಹೇಗೆ…? ಮೈಸೂರಿನಲ್ಲಿ ನೀವೇನಾದರು ಇದ್ದರೆ ಖಂಡಿತ ನಮ್ಮ ಮನೆಯ ಮುಂಭಾಗದಲ್ಲಿರುವ ಪಾರ್ಕಿಗೆ ಬನ್ನಿ.. ಅಲ್ಲೊಂದು ಗಿಡ ನೆಡಿ.. ಅಲ್ಲಿಯೆ ಬರಬೇಕೆಂದಲ್ಲ ನಿಮ್ಮ ಮನೆಯ ಅಂಗಳದಲ್ಲೋ ಅಥವಾ ಕಛೇರಿಯಲ್ಲೋ ಒಂದು ಗಿಡ ನೆಡಿ…

ಇನ್ನಷ್ಟು ವರ್ಷವಾದ ಬಳಿಕ ನಮ್ಮ ಮುಂದಿನ ಪೀಳಿಗೆ ಆ ಮರದ ಗಾಳಿ ಸವಿಯಲಿ… ಹಾಗೇನಾದರು ಬಿಸಿಲಿದ್ದಲ್ಲಿ ಕೊಂಚ ಸಮಯ ಆ ಮರದಡಿಯಲ್ಲಿ ನಿಂತು ಹೊರಡಲಿ….

–ವೀಣಾ ಶಿವಣ್ಣ.


ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ….

May 17, 2008

ಹೀಗೆ ಒಂದಿಷ್ಟು ಹಾಡು ಕೇಳುತ್ತ ಮಗನಿಗೆ ಹಾಡನ್ನು ಕೇಳಿಸುತ್ತ ಕೆಲ ಹಾಡುಗಳನ್ನು ಮೆಲುಕು ಹಾಕುತ್ತಿದ್ದೆ. ಬಾಲ್ಯದಿಂದಲು ಕೇಳಿಕೊಂಡು ಬರುತ್ತಿದ್ದ ಈ ಹಾಡು ಇಂದು ಬಹಳ ನೆನಪಾಯ್ತು. ಸಿ.ಡಿ. ಹುಡುಕಿ ಆ ಹಾಡನ್ನು ಒಂದೆರಡು ಸಲ ಕೇಳಿ ಕೇಳಿ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಹಾಗೆಯೇ ಆ ಹಾಡಿನಲ್ಲಿ ಬರುವ ಸಾಲುಗಳನ್ನು ನನ್ನ ಮಗ ನನಗೆ ಹಾಡಿ ಕೃಷ್ಣ ಮಾಡಿದ ಎಲ್ಲ ನಾಟಕವನ್ನು ಮಾಡಿದರೆ ಹೇಗಿರುತ್ತೆಂದು ನೆನೆದುಕೊಂಡು ಹಾಗೆ ಒಳ ಒಳಗೆ ನಕ್ಕು ಸುಮ್ಮನಾದೆ.

ಚಿತ್ರಗಳು ಸಿಕ್ಕವು , ಹಾಗಾಗಿ ಆ ಹಾಡನ್ನು ಇಲ್ಲಿ ಬರೆಯೋಣ ಎನ್ನಿಸಿತು.

 ———————————————————————————————————-

 ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

amma ಕೃಷ್ಣ ಒಬ್ಬ ಪುಟ್ಟ ಕಂದಮ್ಮನಾಗಿ, ತನ್ನ ಅಮ್ಮ ಯಶೋಧೆಗೆ ತಾನು ಬೆಣ್ಣೆ ಕದ್ದೆ ಇಲ್ಲ ಎಂಬ  ನಟನೆ ಮಾಡುತ್ತಾನೆ, ಹಾಗೆಯೇ, ಇನ್ನು ನಂಬಿಕೆ ಬರಲೆಂದು, ಬೇರೆಯವರು ತನ್ನ ಬಾಯಿಗೆ ಬೆಣ್ಣೆ ಮೆತ್ತಿದ್ದಾರೆಂಬ ದೂರು ನೀಡುತ್ತಾನೆ. (ಕೃಷ್ಣ ದೇವರಾದರೇನು, ಅಮ್ಮನಿಗೆ ಮಗನೆ, ಹಾಗೆ ಎಲ್ಲ ಮಕ್ಕಳು ಸಹ ತಾವು ತಪ್ಪು ಮಾಡಿ, ಬೇರೆಯವರು ಮಾಡಿರೆಂದು ಹೇಳುವುದು ಒಂದು ಅಭ್ಯಾಸ, ಬಹುಶಃ ಇದನ್ನು ಕಳ್ಳ ಕೃಷ್ಣನೇ ಮಕ್ಕಳಿಗೆ ಹೇಳಿಕೊಟ್ಟಿರಬೇಕು. :-)  
 
 
 
 
 
 
 
 
 
ನೀನೇ ನೋಡು ಬೆಣ್ಣೆ ಗಡಿಗೆ ಸೂಲಿನ ನೆಲುವಲ್ಲಿ, ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||ಅಮ್ಮ ||
 

   

 

 

 

 

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ,ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||ಅಮ್ಮ ||

                                       

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಸೂರದಾಸ ಪ್ರಿಯಶಾಮನ ಶಾಮನ … ಸೂರದಾಸ ಪ್ರಿಯಶಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮ ||  

ನಿನ್ನ ಮಗ ಬೆಣ್ಣೆ ಕದ್ದನೆಂಬ ದೂರಿನೊಂದಿಗೆ ಬಂದ ಗೋಪಿ ಮುತ್ತಿಟ್ಟು ನಗುವಂತೆ ಮಾಡುತ್ತವೆ ಕಂದನ ನೆಪಗಳು..

 

 

 

 

 ಹೆಚ್.ಎಸ್.ವೆಂಕಟೇಶ್ ಮೂರ್ತಿ ಯವರ ರಚನೆ ಬಹಳ ಅಧ್ಭುತ

 

– ವೀಣಾ ಶಿವಣ್ಣ

 


ಲಾಲಿ - ಅದ್ಭುತ ಸಂಗೀತ ಹಾಗು ಹಾಡುಗಳು….

April 23, 2008

ಪಲ್ಲವಿ ಅರುಣ್

ಸುಮಾರು ಐದಾರು ತಿಂಗಳುಗಳಿಂದ ಕೆಲ ಹಾಡುಗಳನ್ನು ಹುಡುಕುತ್ತಿದ್ದೆ. ಅದರ  ಸಂಗೀತ ಅಥವ ಸಾಹಿತ್ಯ  ವೈಖರಿಗಷ್ಟೆ ಅಲ್ಲ , ಅದನ್ನು ಕೇಳಿದರೆ ಯಾರಿಗಾದರು ಹಿತವೆನ್ನಿಸಬೇಕು ಅದನ್ನು ಕೇಳುತ್ತಲೇ ಇರಬೇಕು ಅನ್ನುವಂತಹದ್ದು.. ಹಾಗೆ ಕೇಳುತ್ತಾ ನಿದ್ದೆ ತರಿಸುವಂತದ್ದು…

ಕನ್ನಡದಲ್ಲಿ ಅಂತಹ ಹಾಡುಗಳು ನೂರಾರು ಇವೆ. ಅದನ್ನೆಲ್ಲ ಒಂದೆ ಒಂದು ಸಿ.ಡಿ ಯಲ್ಲಿ ಸಿಗುತ್ತದೆಯಾ ಅಂತ ಒಂದಷ್ಟು ಸ್ನೇಹಿತರನ್ನು ಕೇಳಿದೆ. ಮಕ್ಕಳಿಗೆ ಅಂದಾಕ್ಷಣ ಎಲ್ಲರಿಗು ನೆನಪಿಗೆ ಬರೋದು ಕೆಲ ಶಿಶು ಗೀತೆಗಳು.. ಅದನ್ನು ಕೇಳಿ ಆನಂದಿಸಬೇಕೆಂದರೆ ಇನ್ನು ಕೆಲ ವರ್ಷಗಳೇ ಬೇಕು ನನ್ನ ಮಗ ಸಿದ್ಧಾಂತನಿಗೆ.

ಮೊನ್ನೆ ಹೀಗೆ ಮ್ಯುಸಿಕ್ ವರ್ಲ್ಡ್ ಗೆ ಹೊಗಿದ್ದಾಗ ನನ್ನ ಕಣ್ಣಿಗೆ ಬಿದ್ದದ್ದು ಈ ಸಿ.ಡಿ.. ಒಂತರ ನನ್ನ ಹುಡುಕಾಟಕ್ಕೆ ಫಲ ಸಿಕ್ಕ ಹಾಗೆ ಇತ್ತು ಇದು.

——————————————————————————————————————————————————————-

ದಾಸ ಸಾಹಿತ್ಯಕ್ಕೆ, ಸುಮಧುರ ಸಂಗೀತ ನೀಡಿರುವ ಪ್ರವೀಣ್ ರಾವ್, ಹಾಗೆ ತಮ್ಮ ಕಂಠಸಿರಿ ಇಂದ ನಮ್ಮನೆಲ್ಲಾ ಆನಂದ ಗೊಳಿಸುವುವ ಪಲ್ಲವಿಗು ನನ್ನ ವಂದನೆಗಳು….!

ಇದರಲಿನ್ನ ಒಂದೊಂದು ಹಾಡುಗಳು ಅತ್ಯದ್ಬುತ.. ನನಗನ್ನಿಸಿದ ಹಾಗೆ ಇಲ್ಲಿ ವಿಶ್ಲೇಶಿಸಿದ್ದೇನೆ.

೧ - ಜೋ ಜೋ ಓ ರಂಗಧಾಮ - ಆ ಕಂದ ಕೃಷ್ಣನ್ನ ಮಲಗಿಸಲು ತಾಯಿ ಯಶೋಧೆ ಹಾಡಿದ ಹಾಡುಗಳೆಷ್ಟೋ, ವಿಷ್ಣುವಿನ ಕೆಲ ಸಾತ್ವಿಕ ಅವತಾರಗಳನ್ನು ಆಧರಿಸಿ ರಚಿಸಿದ ಹಾಡು ಇದು. ಒಂದೆರಡು ಸಾಲುಗಳು ಹೀಗಿವೆ.

ವಸುದೇವ ಸುತನಾದ ಮುದ್ದು ಮುರಾರಿ, ಅಸುರಿ ಪೂತನಿಯ ಪ್ರಾಣೋಪಹಾರಿ…

ಪರುಶು ಧರಿಸಿ ಕ್ಷತ್ರಿಯರ ಸವರಿದೆ, ದುರುಳ ರಾವಣ ಶಿರವ ಚೆಂಡಾಡಿದೆ….

ಸುಮಾರು ಎಂಟು ನಿಮಿಷಗಳ ಕಾಲ ಹಾಗೆ ಹರಿದು ಬರುವ ಈ ಹಾಡು ಬಹಳ ಸೊಗಸಾಗಿದೆ. ಇದರಲ್ಲಿನ ಸುಮಧುರ ಸಂಗೀತ ಹಾಗು ಸಾಹಿತ್ಯ ಅಪರೂಪದ್ದು.

೨ - ತೂಗಿರೆ ರಂಗನ್ನ ತೋಗಿರೆ ಕೃಷ್ಟ್ಣನ್ನ - ಮಗುವನ್ನು ತೊಟ್ಟಿಲಲ್ಲಿ ತೂಗುತ್ತ ತೂಗುತ್ತ ಹಾಡುವ ಹಾಡು ಇದು. ತೊಟ್ಟಿಲು ಶಾಸ್ತ್ರಕ್ಕೆ ಅಂತಾನೆ ಬರೆದ ಹಾಡಿರಬೇಕು ಅನ್ನಿಸುತ್ತದೆ.

೩ - ಪವಡಿಸು ಪರಮಾತ್ಮನೆ ಸ್ವಾಮಿ - ಆ ತಾಯಿ ತನ್ನ ಮಗುವನ್ನು ಮಲಗು ಸ್ವಾಮಿ ಎಂದು ಕೇಳಿಕೊಳ್ಳುವ ಸಂಗತಿ ಈ ಹಾಡಿನಲ್ಲಿದೆ. ಬಹಳ ಸುಂದರ ಹಾಗು ಸುಶ್ರಾವ್ಯ ಸ್ವರ ಗಳಿಂದ ಕೂಡಿದೆ ಈ ಲಾಲಿ ಪದ.

೪-ಜೋ ಜೋ ಶ್ರೀ ಕೃಷ್ಣ ಪರಮಾನಂದ - ಯಶೋಧೆ ಆ ಮುರಾರಿಗೆ ಹಾಡುವ ಹಾಡಿದು. ಬಹಶಃ ದಶವತಾರಗಳಲ್ಲಿ ಸುಮಾರು ಲಾಲಿ ಹಾಡುಗಳನ್ನು ಕೇಳಿದ್ದು ಈ ಅವತಾರದಲ್ಲಿಯೇ ಇರಬೇಕು ಆ ಹರಿ.

೫ - ಲಾಲಿ ಪಾವನ ಚರಣ - ಒಂದು ಸುಂದರ ಹಾಡು, ಈ ಹಾಡನ್ನು ಕೇಳುತ್ತ ಕೇಳುತ್ತ ಮಗು ನಿದ್ದೆ ಹೋಗುವುದು ಹೆಚ್ಚು. ಈ ಹಾಡು ಆ ನಿದ್ರಾದೇವಿಯನ್ನು ಭುವಿಗೆ ತರುವ ಶಕ್ತಿ ಹೊಂದಿರಬೇಕು..!!

೬ - ಜೋ ಜೋ ಕಂದರ್ಪಕೋಟಿ ಲಾವಣ್ಯ - ಈ ಹಾಡು ಬರುವ ಅಷ್ಟರಲ್ಲಿ ಮಗು ನಿದ್ದೆ ಹೋಗಿಬಿಡ್ತಾನೆ, ಈ ಹಾಡು ಕೇಳಿರೋದು ನಾನು ಒಂದೆರಡೆ ಸಲ :-)

೭ - ಲಾಲಿ ಗೋವಿಂದ ಲಾಲಿ - ಈ ಹಾಡಿನಲ್ಲಿ ಒಂದು ಉನ್ನತ ರಿಧಮ್ ಇದೆ. ಹಾಗೆ ಕೇಳುತ್ತ ನಮಗೆ ಗೊತ್ತಿಲ್ಲದೆಯೇ ಕಾಲು ಕುಣಿಸುವಂತೆ ಮಾಡುವ ಒಂದು ಮಾದುರ್ಯ ಇದೆ.

ನೀವೆಲ್ಲ ಕೇಳಿ ಆನಂದಿಸಿ… ಹಾಗೆ ಕೆಲವು ಭಾವಗೀತೆಗಳು ಹಾಗು ಸಿನಿಮಾ ಹಾಡುಗಳು ಒಂದೆ ಸಿ.ಡಿ ಯಲ್ಲಿ ಲಭ್ಯವಾದರೆ ಎಷ್ಟು ಚೆನ್ನ.. ನನಗೆ ಇಷ್ಟವಾದ ಹಾಡುಗಳು ಹೀಗಿವೆ.

೧-ಆತ್ತಿತ್ತ ನೋಡದಿರು ಎದ್ದು ಹೊರಳಾಡದಿರು - ಭಾವ ಸಂಗಮ

೨ - ನಿನ್ನ ಮುಖ ಅರವಿಂದ ನಿನ್ನ ನಗು ಶ್ರೀಗಂದ - ಕಲ್ಯಾಣಿ

೩ - ರಾಜೀವ ನೇತ್ರನಿಗೆ - ಸ್ವಾತಿಮುತ್ತು

೪ - ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ - ಭಕ್ತ ಪ್ರಹ್ಲಾದ

೫ - ಹಿಂದುಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗು - ಅಮೃತಘಳಿಗೆ

ಹೀಗೆ ನಿಮಗು ಇಂತಹ ಹಾಡು ಗಳು ಇಷ್ಟವಾದಲ್ಲಿ ತಿಳಿಸಿ.. ಲಾಲಿ ಹಾಡು ಗಳನ್ನು ಕೇಳಿ ಆನಂದಿಸಿ.

-ವೀಣಾ ಶಿವಣ್ಣ

ಪೂರಕ ಓದಿಗೆ - ಭಾವಗೀತೆಗಳ ಗುಛ್ಛ


Blogger’s Meet at Bangalore….

March 21, 2008

Muktabalaga and other bloggers….

Its been long time after we all met. Of course, few of you have met during Tyagaraja aradhane at Usha’s residence.

Well, Ram had sent an email about his India trip and meeting all of you. I am sure you all would have Ram visited your blogs. I am pasting the email here.

Please coordinate for the meet and keep Ram posted about  this. I will see you once I am there at Bangalore..! Happy blogging and meeting.

–Veena!

Email Excerpt from Ram 

———————————————

About meeting sometime in Bangalore - that would be great. We will be in Bangalore for the month of April until the 25th. We are preparing Vidya for her first long flight after her first trip when she was 4 months old. :)
 
We will be traveling to Tirupati and tentatively to Mysore (to take Vidya around the KRS, sanctuary, etc) and tentatively to Udupi. We will be in Bangalore for the rest of the time. 


two quotes in two eras by two great sons of India

January 29, 2008

If we ignore who said this and when, but just look at the statements as  they are…

ದಯವೇ ಧರ್ಮದ ಮೂಲವಯ್ಯ - dayave dharmada muulavayya - Compassion is the root of Dharma
ಆಸಯೇ ದುಖದ ಮೂಲ - aasaye dhukkhada muula -  Attachment is the root cause of misery

These two statements seem to be different but concur at the root. Because real compassion can only be achieved after going beyond attachment. Freedom from misery is real Dharma.

Any other comments or similar quotes…? :)


RANDOM MUSINGS

December 27, 2007
“The chirping birds are heading home
The wind is howling less,
The fiery red of the midday sun
Is now in pale contrast . . .”


The rays of the setting sun convey such a profound knowledge - if only man were attuned enough to recognize and realize it. The fiery red gradually dims into a pale orange, the orb glittering like gold is next surrounded by a yellow halo and this magnificient orb changes colour - from orange to yellow to pale red to violet - till it gradually merges as one with the skyscape.


These changing colours seem to be saying - WHY??? WHY??? Why are you ‘Oh ! Man’, God’s most beautiful creation - burdening yourself with these earthly glories??? For after all, they too will become dust sometime in the not so distant future. They seem tomock our attitude of today of “ALL FOR’I’ and ‘I’ FOR NONE”!!!


Just like the various colours of sunset, so too does man’s life melt away into the darkness - each after having experienced the different colours - of joy, sorrow, jealousy, anger, fear, surprize, tenderness, greed - and finally melting away into nothing . . . where nothing exists but “peace” - profound and absolute.


Even when the sun is about to slip away, when total darkness is, but just a breath away, thentoo he tries to light up a weary traveller’s long and lonely walk, back home; provides just enough light for the mother sparrow to put the feed into her delicate baby’s mouth - before melting away to darkness, but always always always with the promise of a better tomorrow.


So too in life . . . Let bygones be bygones and learn to rest all troubles and sorrows alongwith the sun . . . Let them all melt away into darkness and forever remain buried there.


Can’t the beautiful spectacle of sunset serve as an example to enable today’s self-centered, egoistic, material human to rise above everything petty and superfluous to regain the place at the top of God’s creation???!!! Or is it already too late?!!


Is it that today’s man has passed way beyond the point of no return?!!? Is there no way, no hope, no inspiration to bring him back?? Is man going to become so self-centered that all his claims of being the ultimate of all of God’s creations will be brought to nought??!!


Let the fading twilight be your inspiration Ye Man . . . To learn to accept your own foibles - and those of your bretheren - and let this light illuminate your path back to goodness, to human-ness . . . let the setting sun bring you back to the old ways of humility, humbleness and humanity . . . . . . .


“The fiery rays of the setting sun
Were softened by the approaching hour of dusk
And ’twas in this enchanted hour
Man was back to being human!!”


- DIYA

ಹಾಗೆ ಸುಮ್ಮನೆ!!

December 11, 2007

ಈ ಗುಂಪಲ್ಲಿ ಎಲ್ಲರ ಬಗ್ಗೆ ಬರೀತಾ ಹೋದ್ರೆ ಒಂದು ಬ್ಲಾಗ್ ಪೋಸ್ಟ್ ಸಾಲಲ್ಲ…. ಸಧ್ಯಕ್ಕೆ ಈಗ ಶ್ರೀಕ್ ಬಗ್ಗೆ ಬರಿತೀನಿ..

೧. ಆಫೀಸ್ ನಲ್ಲಿ ರಜಾ ದಿನಗಳಲ್ಲು ಕೆಲ್ಸ ಮಾಡೊವ್ರು….?

೨. ಇರೋ ಬರೋ ಬೆಟ್ಟ ಗುಡ್ಡನ್ನೆಲ್ಲಾ ಬೈಕ್ ತೊಗೊಂಡು ಸುತ್ತೊರು ಯಾರು..?

೩. ಎಲ್ಲರನ್ನು ಕೀಟ್ಲೆ ಮಾಡಿ ತಮಾಷೆ ನೋಡೊವ್ರು ಯಾರು..?

೪. ಬ್ಲಾಗ್ ನಲ್ಲಿ ಸೂಪರ್ ಪೋಸ್ಟ್ ಜೊತೆ ಚಿತ್ರ, ವಿಡಿಯೊ ಗಳನ್ನು ನಮಗೆ ತೋರಿಸುವವರು ಯಾರು ?

೫. ತುಂಬಾ ಚೆನ್ನಾಗಿ ಹಾಡೊವ್ರು ಯಾರು ?

೬. ಹಾಗೆ ವೀಣೆ ನುಡಿಸುವವರು ಯಾರು ?

ಎಲ್ಲಾದಕ್ಕು ಒಂದೆ ಉತ್ತರ.. ಅದು ಶ್ರೀಕಾಂತ್…

–ವೀಣಾ…

ಇಲ್ಲಿ ಕ್ಲಿಕ್ ಮಾಡಿ…